ಕಂಡು ಕಂಡೂ ನೀ ಎನ್ನ -ಪುರಂದರದಾಸರು



ಕಂಡು ಕಂಡೂ ನೀ ಎನ್ನ ಕೈಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷತ್ತಮಾ ದೇವ.....{ಪಲ್ಲವಿ}

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿಹೆನು ಶ್ರೀ ಕೃಷ್ಣ..........{ಪಲ್ಲವಿ}

ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದಭವದಿ ನೊಂದೆ ನಾನು
ಸನಕಾದಿ ಮುನಿವಂದ್ಯ ವನಜ ಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣ........{ಪಲ್ಲವಿ}

ಭಕ್ತವತ್ಸಲನೆಂಬ ಬಿರುದುಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೇ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರಾವಿಠ್ಠಲ ಶ್ರೀಕೃಷ್ಣ.......{ಪಲ್ಲವಿ}

-----------------------------------------------------------------------------------------------

ಚಿತ್ರ :ಭಲೇ ಅದೃಷ್ಟವೋ ಅದೃಷ್ಟ (೧೯೭೧)

ಸಾಹಿತ್ಯ : ಪುರಂದರದಾಸರು
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್.ಜಾನಕಿ