ಇದು ನಾನು ೨೦೦೬ ರ ಡಿಸೆಂಬರ್ ೧೦ ರಂದು ಬಿಡಿಸಿದ ಚಿತ್ರ. ಬ್ಲಾಗ್ ಸ್ಪಾಟ್ ಜಾಲವು ಹೆಚ್ಚು ಗುಣಮಟ್ಟದ ಚಿತ್ರಗಳನ್ನು ಪ್ರೋತ್ಸಾಹಿಸುವುದಿಲ್ಲ. ಈ ಚಿತ್ರ ಇನ್ನೂ ಗುಣಮಟ್ಟದೊಂದಿಗೆ ಬೇಕಾದಲ್ಲಿ ,ಕೆಳಕಂಡ ವಿಳಾಸಕ್ಕೆ e-ಮೇಲಿಸಿರಿ.varunvvasista@yahoo.co.in
ಪ್ರಪಂಚದ ಅತ್ಯಂತ ಸುಂದರ ಲಿಪಿಯಲ್ಲಿ ...
ಇದು ನಾನು ೨೦೦೬ ರ ಡಿಸೆಂಬರ್ ೧೦ ರಂದು ಬಿಡಿಸಿದ ಚಿತ್ರ. ಬ್ಲಾಗ್ ಸ್ಪಾಟ್ ಜಾಲವು ಹೆಚ್ಚು ಗುಣಮಟ್ಟದ ಚಿತ್ರಗಳನ್ನು ಪ್ರೋತ್ಸಾಹಿಸುವುದಿಲ್ಲ. ಈ ಚಿತ್ರ ಇನ್ನೂ ಗುಣಮಟ್ಟದೊಂದಿಗೆ ಬೇಕಾದಲ್ಲಿ ,ಕೆಳಕಂಡ ವಿಳಾಸಕ್ಕೆ e-ಮೇಲಿಸಿರಿ.ಅಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ
ದಡಿಕೀಲೆ ಉಡಿಯಕ್ಕಿ ಹಾಕಿದರವ್ವ
ಒಳ್ಳೆ ದುಡುಕೀಲೇ ಮುಂದಕ್ಕೆ ನೂಕಿದರವ್ವ
ಮಿಡಿಕ್ಯಾಡಿ ಮದಿವ್ಯಾದೆ ಮೋಜು ಕಾಣವ್ವ
ನೀ ಹುಡುಕ್ಯಾಡಿ ಮಾಯದ ಮರವೇರಿದ್ಯವ್ವ
ರಂಗೀಲೀ ಉಟ್ಟೀದಿ ರೇಶ್ಮೀ ದಡಿ ಸೀರಿ
ಮತ್ತ ಹಂಗ ನೂಲಿನ ಪರಿವಿ ಮರಿತ್ಯವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತು ಆದ್ಯವ್ವ ಗೌರಿ

ಕಂಡು ಕಂಡೂ ನೀ ಎನ್ನ ಕೈಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷತ್ತಮಾ ದೇವ.....{ಪಲ್ಲವಿ}
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿಹೆನು ಶ್ರೀ ಕೃಷ್ಣ..........{ಪಲ್ಲವಿ}
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದಭವದಿ ನೊಂದೆ ನಾನು
ಸನಕಾದಿ ಮುನಿವಂದ್ಯ ವನಜ ಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣ........{ಪಲ್ಲವಿ}
ಭಕ್ತವತ್ಸಲನೆಂಬ ಬಿರುದುಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೇ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರಾವಿಠ್ಠಲ ಶ್ರೀಕೃಷ್ಣ.......{ಪಲ್ಲವಿ}
-----------------------------------------------------------------------------------------------
ಚಿತ್ರ :ಭಲೇ ಅದೃಷ್ಟವೋ ಅದೃಷ್ಟ (೧೯೭೧)
ಸಾಹಿತ್ಯ : ಪುರಂದರದಾಸರು
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್.ಜಾನಕಿ

ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ?
ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ?
ನೀನಿತ್ತ ಕಾಯSS..
ಆ ಆ ಆ ಆಅ
ನಿನ್ನ ಕೈಲಿ ಮಾಯ
ಆಗೋದು ಹೋಗೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ಮಾಳಿಗೆ ಕೊಟ್ಟರೆ ಮರದಡಿಯೆ ಇಟ್ಟರೆ
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆSS..
ಆ ಆ ಆ ಆಅ
ಸಾರಂಗ ಮನಕೆ ನೂರಾರು ಬಯಕೆ
ಉಂಡಿಟ್ಟು ಋಣಿಸೋದು ನಾ ಕಾಣೆನೆ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ
ಬಾಗುವುದು ನನ್ನ ಕಾಯ

ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು|
ಏನ ಬಲ್ಲೆನು ನಾನು ನೆರೆಸುಜ್ನಾನಮೂರುತಿ ನೀನು
ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮ ಅನವರತ ||
ದೇವ ... ದೇವ.... ದೇವ....
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ ಬಾಗಿಲನು ತೆರೆದು
ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲೂ...
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಬಾಗಿಲನು ತೆರೆದು
ಕಡುಕೋಪದಿಂ ಖಳನು ಖಡ್ಗವನೆ ಪಿಡಿದು..
ನಿನ್ನೊಡೆಯ ಎಲ್ಲಿಹನು ಎಂದು ನುಡಿಯೇ..
ಧೃಢ ಭಕುತಿಯಲು ಶಿಶುವು ಬಿಡದೆ ನಿನ್ನನು ಭಜಿಸೆ..
ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ ಬಾಗಿಲನು ತೆರೆದು...
ಯಮಸುತನ ರಾಣಿಗೆ ಅಕ್ಷಯವಸನವನಿತ್ತೆ
ಸಮಯದಲಿ ಅಜಮಿಳನ ಪೊರೆದೇ...
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೇ ಬಾಗಿಲನು ತೆರೆದು...
ಬಾಗಿಲನು ತೆರೆದು
ಬಾಗಿಲನು ತೆರೆದು... ಸೇವೆಯನು ಕೊಡೊ ಹರಿಯೇ

(ಮಾಹಿತಿ: ಶ್ರೀ ರಾಘವೇಂದ್ರ ತೀರ್ಥರ ಕೃತಿಯ ಪೂರ್ಣ ಸಾಹಿತ್ಯವನ್ನು ಇಲ್ಲಿ ಕೊಡಲಾಗಿದೆ. ಇದರ ಎರಡು ಚರಣಗಳನ್ನು ಮಂತ್ರಾಲಯ ಮಹಾತ್ಮೆ ಮತ್ತು ಎರಡು ಕನಸು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ .)
ಇಂದು ಎನಗೆ ಗೋವಿಂದ ನಿನ್ನ ಪಾದರ
ವಿಂದವ ತೋರೋ ಮುಕುಂದ |ಪ|
ಸುಂದರ ವದನೆನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ|
ನೊಂದೆನೆಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ |೧|
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ |೨|
ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲಾ
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು ಮದುವೆಯಿಲ್ಲಾ
ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು
ಇಂತ ಬಾಳಿಗೆ ಒಲವೆ ನಿನ್ನ ಕನಸು
ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರ ಕೇಳಬೇಕು
ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ
ಮಗಳ ಮಾತನು ಕೇಳಿ ನಕ್ಕು ಬಿಟ್ಟರು ತಂದೆ
ಒಳಗೆ ನಂದಾದೀಪ ನಂದಿ ಹೋಗ್ಲಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ
ತೆರಳಿದನು ಜೋಯಿಸನು ತಣ್ಣಗಾಗಿ
ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು
ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೆ ಇಂತ ಕಪ್ಪು ಗಂಡು
ಶಾನುಭೋಗರ ಮನೆಯ ತೋರಣವೆ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು
ಶಾನುಭೋಗರ ಮಗಳು ರತ್ನದಂತಹ ಹುಡುಗಿ
ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ
ತಡವಾದರೇನಂತೆ ನಷ್ಟವಿಲ್ಲ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಾoಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದ್ಹಾಂಗೆ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೆ ಮರಸತೀ ದು:ಖ
ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ಪ್ರೀತಿಯ ಮನಃಶಾಂತಿಯ ಸಿರಿ ಹೊನ್ನಿನ ನಾಡಿದು
ಹಸಿರು ವನಗಳ ತಂಪು ನದಿಗಳ ಸುಂದರ ಬೀಡಿದು
ಲೋಕವೇ ಒಂದಾಗುವ ಸಂಗಮ ಭೇದವೇ ಇಲ್ಲದ ಹಿರಿತನ
ನಾಳಿನ ಹೊಸ ಆಶಾಕಿರಣ ನಮ್ಮ ನಾಡು ಕರುನಾಡು
ಕಡಲಿನ ಮಲೆ ಮಡಿಲಿನ ಬಿಸಿ ಬಯಲಿನ ತವರಿದು
ಬೆವರ ಹನಿಗಳು ವಿವಿಧ ದನಿಗಳು ಎಳೆಯುವ ತೇರಿದು
ಜ್ಞಾನದ ಪರಿಜ್ಞಾನದ ಹಂಬಲ ಚಿಗುರಿಗೆ ಬೇರಿನ ಬೆಂಬಲ
ಮಮತೆಯ ಸಮತೆಯ ಅಂಗಳ ನಮ್ಮ ನಾಡು ಕರುನಾಡು
---------------------------------------------------------------------------------------------
ಚಿತ್ರ: ಸೈಕೊ
ಸಾಹಿತ್ಯ: ರಘು ದೀಕ್ಷಿತ್, ಜಯಂತ್ ಕಾಯ್ಕಿಣಿ
ಸಂಗೀತ: ರಘು ದೀಕ್ಷಿತ್
ಹಾಡಿರುವವರು: ರಘು ದೀಕ್ಷಿತ್
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆ ಬಡಿವ ಸಂಭ್ರಮದ ನೆಪವೋ
ರಾಮನ ಅವತಾರ ರಘುಕುಲ ಸೋಮನ ಅವತಾರ
ಶ್ರೀಕಾಳಿ ಗೋವಿಂದರಾಜನ್
ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ
ದಾಶರಥಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತ್ರುಘ್ನ ಭರತ
ರಾಮನ ಅವತಾರ ರಘುಕುಲ ಸೋಮನ ಅವತಾರ
ತ್ರಿಭುವನಪಾಲಗೆ ನೆಪಮಾತ್ರ ವರಾಗುರು ವಿಶ್ವಾಮಿತ್ರ
ತ್ರಿಭುವನಪಾಲಗೆ ನೆಪಮಾತ್ರ ವರಾಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹಾರಿಸುವ ಗಾತ್ರ
ರಾಮನ ಅವತಾರ ರಘುಕುಲ ಸೋಮನ ಅವತಾರ
ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಕಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ
ರಾಮನ ಅವತಾರ ರಘುಕುಲ ಸೋಮನ ಅವತಾರ
ಕಪಟನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನವಾಸದ ಕುಹಕ
ಲೋಕೋದ್ಧಾರದ ಮೊದಲಂಕ
ಭರತಗೆ ಪಾದುಕೆ ನೀಡುವ ವೇಷ
ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯ ಆದೇಶ
ನರಲೋಕಕೆ ನವನಿಧಿ ಸಂತೋಷ
ನರಲೋಕಕೆ ನವನಿಧಿ ಸಂತೋಷ
ಭರವಸೆ ನೀಡುವ ಸಂದೇಶ
ರಾಮನ ಅವತಾರ ರಘುಕುಲ ಸೋಮನ ಅವತಾರ
ಆಹಾ..! ನೋಡದೋ ಹೊನ್ನಿನ ಜಿಂಕೆ
ಆಹಾ..! ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೆ
ಮಣ್ಣಾಗುವೆ ನೀ ನಿಶ್ಯoಕೆ
ಶರಣು ಶರಣು ಹೇ ಭಾಗವತ್ತೋತ್ತಮ
ಕನ್ನಡ ಕುಲಪುoಗವ ಹನುಮ
ಮುದ್ರಿಕೆಯಲ್ಲಿದು ಸೋಹಮ್ ಬ್ರಹ್ಮ
ಎಂಬುವ ಸತ್ಯವ ತಿಳಿಸಮ್ಮ
ಎಂಬುವ ಸತ್ಯವ ತಿಳಿಸಮ್ಮ
ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ
ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀಕಥೆ ಅಮರ
ಮೆರೆಯಲಿ ಈ ಶುಭ ತತ್ವ ವಿಚಾರ
ಪರಸತಿ ಬಯಕೆಯ ಸಂಹಾರ
ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ ರಘುಕುಲ ಸೋಮನ ಅವತಾರ
---------------------------------------------------------------------------------------------------